Date : 22/12/2017

ಗಾಯತ್ರಿ ಮಹಾಯಜ್ಞ: ಮಂಟಪಗಳ ರೂಪುರೇಶೆ ಸಿದ್ಧ


ಲೋಕ ಕಲ್ಯಾಣಾರ್ಥವಾಗಿ ಹುಬ್ಬಳ್ಳಿಯ ತಡಸದ ಬಳಿಯ ಗಾಯತ್ರಿ ತಪೋ ಭೂಮಿಯಲ್ಲಿ ಜ.22ರಿಂದ 29ರವರೆಗೆ ಒಂದು ವಾರಗಳ ಕಾಲ ನಡೆಯುವ `24ನೇ ಕೋಟಿ ಗಾಯಿತ್ರಿ ಜಪ ಮಹಾಯಜ್ಞ’ ಹಾಗೂ `18ನೇ ಗಾಯಿತ್ರಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ತಯಾರಿಯಾಗಿ ಸಭಾಮಂಟಪ ಹಾಗೂ ಯಜ್ಞಮಂಟಪಗಳ ನಿರ್ಮಾಣದ ರೂಪುರೇಶೆಯನ್ನು ಡಿಸೆಂಬರ್ 14ರಂದು ಸಿದ್ಧಪಡಿಸಲಾಯಿತು.

ಹುಬ್ಬಳ್ಳಿ ಶಾಮಿಯಾನದ ಬಾಬೂರಾವ್ ನೇತೃತ್ವದಲ್ಲಿ ಯಜ್ಞಮಂಟಪ ಹಾಗೂ ಸಭಾಮಂಟಪಗಳು ನಿರ್ಮಾಣವಾಗಲಿದೆ. ಒಟ್ಟು 11 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವೈಭವೋಪೇತ ಮಂಟಪ ನಿರ್ಮಿಸಲಾಗುತ್ತಿದೆ. ಭಕ್ತಾದಿಗಳ ಭದ್ರತೆ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಅಳವಡಿಸಲಾಗುತ್ತಿದೆ. ರೂಪುರೇಶೆ ಸಿದ್ಧತಾ ಸಭೆಯಲ್ಲಿ ಗಾಯತ್ರಿ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಆಕಳವಾಡಿ ಹಾಗೂ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ ಮತ್ತಿತರು ಉಪಸ್ಥಿತರಿದ್ದರು.