ಶ್ರೀ ಕೃಷ್ಣೇಂದ್ರ ಗುರುಗಳ ಸಂಕ್ಷಿಪ್ತ ಪರಿಚಯ

January 16, 2018   

ಈ ಕಲಿಕಾಲದಲ್ಲಿ ನಮ್ಮ ಕರ್ನಾಟಕದಲ್ಲಿಯೇ ಸದ್ಗುರು ರೂಪದಿಂದ ಅವತರಿಸಿ, ಕರ್ಮವೈರಾಗ್ಯ ಹಾಗು ಭಕ್ತಿ ಮಾರ್ಗಗಳನ್ನು ಉಪದೇಶಿಸಿ ಸನಾತನ ಧರ್ಮವನ್ನು ಕಾಯ್ದ ಉದಾಹರಣೆಗಳಿಗೇನು ಕಡಿಮೆಯೇ? ಅಂತೆಯೇ ಕರ್ನಾಟಕವು ಇಂದಿಗೂ ಇಡೀ ಭರತ ಖಂಡಕ್ಕೇ ಧರ್ಮಗುರುವೆಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಇಂಥ ಮಹಾಮಹಿಮರಲ್ಲಿ ನಮ್ಮ ಹಳೇ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಗುರುಗಳೂ ಒಬ್ಬರು. ಶ್ರೀಯುತ ಗುರುಗಳು ಅಂದಿನ ಮದ್ರಾಸ್ ಕರ್ನಾಟಕದ ಭಾಗವಾದ ಅನಂತಪುರ ಜಿಲ್ಲೆಯಲ್ಲಿ (ಈಗಿನ ಆಂಧ್ರಪ್ರದೇಶ) ಹದಿನೆಂಟನೆ ಶತಮಾನದ ಕೊನೆಯ ಭಾಗದಲ್ಲಿ ಜನ್ಮವೆತ್ತಿದರು. (ಶ್ರೀ ಶಾಲಿವಾಹನ ಶಕೆ ೧೬೩೮ ಮನ್ಮಥನಾಮ ಸಂವತ್ಸರ ಆಶ್ವಿಜ ಕೃಷ್ಣ ದ್ವಾದಶಿ). ಭಾರತೀಯ ಋಷಿ ಪರಂಪರೆಯಲ್ಲಿ ಉಜ್ವಲ ಮಣಿಮಾಲೆಗೆ ೧೭-೧೮ (ಹದಿನೇಳು-ಹದಿನೆಂಟನೆಯ) ಶತಮಾನದ ಅಮೂಲ್ಯ ಕೊಡುಗೆ ಶ್ರೀ ಕೃಷ್ಣೇಂದ್ರ ಗುರುಗಳು. ವಿಶ್ವದ ಸುದೀರ್ಘ ವರ್ಣಮಯ ಅಧ್ಯಾತ್ಮಿಕ ಇತಿಹಾಸದ ಸುವರ್ಣ ಸಂಪುಟಗಳಲ್ಲಿ ಆಯಾ ದೇಶ, ಕಾಲ, ಸಂಸ್ಕೃತಿಗಳಲ್ಲಿ ಅವತರಿಸಿದ ತಪಸ್ವಿಗಳು, ತ್ಯಾಗಿಗಳು, ಪುಣ್ಯಪುರುಷರು, ಪವಾಡ ಪುರುಷರು, ಮಾನವನ ಅವ್ಯಕ್ತ ಚೇತನದ ಅಭಿವ್ಯಕ್ತಿಗೆ ಕಾರಣವಾಗಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನೇ ಸಮಗ್ರ ಸಮಾಜದ ಶ್ರೇಯಸ್ಸಿಗೆ ಧಾರೆ ಎರೆದು ಒಂದು ಶಾಶ್ವತ ಸತ್ಯದ ಸಾಕ್ಷಾತ್ಕಾರದಲ್ಲಿ ಧನ್ಯತೆಯನ್ನು ಪಡೆದು ಮನುಕುಲವನ್ನು ಉದ್ಧರಿಸಿದ ಕಾರಣಿಕ ಪುರುಷರಲ್ಲಿ ಶ್ರೀ ಕೃಷ್ಣೇಂದ್ರ ಗುರುಗಳು ಅಗ್ರಗಣ್ಯರು. ಇವರ ಅವತಾರವೇ ಗಾಯತ್ರಿ